ಪ್ರಾಚೀನ ಭಾರತದ ಆಳವಾದ ಆಧ್ಯಾತ್ಮಿಕ ಪರಂಪರೆಯನ್ನು ಸಂರಕ್ಷಿಸಲು, ಉತ್ತೇಜಿಸಲು ಮತ್ತು ಪ್ರಚಾರ ಮಾಡಲು ಮೀಸಲಾಗಿರುವ ವಾಙ್ಮನ ಪ್ರತಿಷ್ಠಾನಕ್ಕೆ ಸುಸ್ವಾಗತ.
ವೇಗದ ಜಗತ್ತಿನಲ್ಲಿ, ಸಹಸ್ರಾರು ವರ್ಷಗಳಿಂದ ಮಾನವೀಯತೆಗೆ ಮಾರ್ಗದರ್ಶನ ನೀಡಿರುವ ಸನಾತನ ಜ್ಞಾನದ ಜೊತೆ ಸಂಪರ್ಕ ಸಾಧಿಸಲು ನಾವು ಒಂದು ಅನನ್ಯ ಅವಕಾಶವನ್ನು ನೀಡುತ್ತೇವೆ.
ನಮ್ಮ ದೃಷ್ಟಿಕೋನ
“ವೇದ, ವೇದಾಂಗ ಮತ್ತು ಪಾರಂಪರಿಕ ಜ್ಞಾನವನ್ನು ಹರಡುವ ಮೂಲಕ ಆಧ್ಯಾತ್ಮಿಕ, ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಏಳಿಗೆಯನ್ನು ಸಾಧಿಸುವುದು ವಾಙ್ಮನ ಪ್ರತಿಷ್ಠಾನದ ಉದ್ದೇಶ.”
ನಮ್ಮ ಧ್ಯೇಯ
ವೇದ, ವೇದಾಂಗ ಮತ್ತು ಪಾರಂಪರಿಕ ಜ್ಞಾನದ ವಿದ್ಯಾರ್ಥಿಗಳಿಗೆ ದೈನಂದಿನ ಆನ್‌ಲೈನ್ ಮತ್ತು ವೈಯಕ್ತಿಕ ಕೋರ್ಸ್‌ಗಳು, ವಾರಾಂತ್ಯದ ಕೋರ್ಸ್‌ಗಳು, ಕಾರ್ಯಾಗಾರಗಳು ಮತ್ತು ಕಲಿಕೆಯ ವಾತಾವರಣವನ್ನು ಒದಗಿಸುವುದು ಮತ್ತು ಇದನ್ನು ರಾಷ್ಟ್ರ ಮಟ್ಟದ ವಿದ್ಯಾಸಂಸ್ಥೆಯಾಗಿ ಬೆಳೆಸುವುದು ನಮ್ಮ ಧ್ಯೇಯವಾಗಿದೆ. ಇದರ ಮೂಲಕ ವೇದ ಮತ್ತು ಅದರ ಸಂಪ್ರದಾಯದ ಶಿಕ್ಷಕರಿಗೆ ಸ್ಥಿರವಾದ ಜೀವನೋಪಾಯವನ್ನು ಒದಗಿಸುವುದೂ ಕೂಡ ನಮ್ಮ ಧ್ಯೇಯವಾಗಿದೆ.
ವೇದ, ವೇದಾಂಗ ಮತ್ತು ಪಾರಂಪರಿಕ ಜ್ಞಾನದ ಪ್ರಸರಣ
ಪ್ರಾಚೀನ ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಸಾರ್ವತ್ರಿಕ ಸತ್ಯ ಮತ್ತು ಅದರ ಪ್ರಾಯೋಗಿಕತೆಯ ಜ್ಞಾನ ಇವೆಡೂ ಹೇರಳವಾಗಿದೆ. ಈ ಆಳವಾದ ಜ್ಞಾನವನ್ನು ಬಯಸುವ ಎಲ್ಲರಿಗೂ ಅದನ್ನು ತಲುಪಿಸಬೇಕಷ್ಟೇ.
ಪರಮಸತ್ಯದ ಅನ್ವೇಷಕರಿಗೆ ಪ್ರಾಚೀನ ಭಾರತೀಯ ಆಧ್ಯಾತ್ಮಿಕ ಜ್ಞಾನವು ನಿಧಿಯ ಗಣಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇವೆರಡನ್ನೂ ಸಂಪರ್ಕಿಸುವ ಸೇತುವೆಯಾಗಿ ಕಾರ್ಯನಿರ್ವಹಿಸುವುದು ನಮ್ಮ ಧ್ಯೇಯ.
ವೇದಗಳು, ಉಪನಿಷತ್ತುಗಳು, ಭಗವದ್ಗೀತೆಯ ಇತ್ಯಾದಿಗಳಲ್ಲಿ ಈ ಅಮೂಲ್ಯವಾದ ಜ್ಞಾನವನ್ನು ಸಂರಕ್ಷಿಸಲಾಗಿದೆ. ಇವನ್ನು ಭವಿಷ್ಯದ ಪೀಳಿಗೆಗೆ ಅವುಗಳ ಶುದ್ಧ ರೂಪದಲ್ಲಿ ಪ್ರಸಾರ ಮಾಡುವುದು ಎಲ್ಲ ಭಾರತೀಯರ ಕರ್ತವ್ಯ.
ಸಾಂಪ್ರದಾಯಿಕ ಜ್ಞಾನದ ಸಮಗ್ರ ತಿಳುವಳಿಕೆಯನ್ನು ನೀಡುವುದು, ಕೇವಲ ಆಚರಣೆಗಳಾಗಿ ಅಲ್ಲದೇ ಆಧ್ಯಾತ್ಮಿಕ, ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ದುಡಿಯಲು ವಾಙ್ಮನ ಪ್ರತಿಷ್ಠಾನ ಹೊರಟಿದೆ.
ಈ ಪ್ರಾಚೀನ ಬೋಧನೆಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಸಂಯೋಜಿಸಲು ಭಾರತೀಯರನ್ನು ರಚನಾತ್ಮಕವಾಗಿ ಸಬಲೀಕರಣ ಮಾಡಲು ವಾಙ್ಮನ ಪ್ರತಿಷ್ಠಾನ ಪಣ ತೊಟ್ಟಿದೆ.
ನಮ್ಮ ಧ್ಯೇಯಕ್ಕ ಕೇಂದ್ರಬಿಂದುವಾಗಿರುವವರು ಗೌರವಾನ್ವಿತ ವೇದ – ಶಾಸ್ತ್ರ ಪಂಡಿತರು. ಅವರು ನಮ್ಮ ಕೋರ್ಸ್‌ಗಳನ್ನು ತಮ್ಮ ಆಳವಾದ ಜ್ಞಾನ ಮತ್ತು ವ್ಯಾಪಕ ಅನುಭವದಿಂದ ವಿನ್ಯಾಸಗೊಳಿಸಿದ್ದಾರೆ.
ಈ ಪಂಡಿತರು ಕೇವಲ ಬೋಧಕರಲ್ಲ; ಅವರು ಭಾರತೀಯ ಸಂಪ್ರದಾಯದ ಜೀವಂತ ಉದಾಹರಣೆ! ವೇದ – ಶಾಸ್ತ್ರಗಳ ಕಠಿಣ ಅಧ್ಯಯನ, ಆಚರಣೆ ಮತ್ತು ಪ್ರಸಾರಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.
ಅವರ ಜ್ಞಾನವು ಕೇವಲ ಶೈಕ್ಷಣಿಕವಲ್ಲ; ಅದು ಹತ್ತಾರು ವರ್ಷಗಳ ಸಮರ್ಪಿತ ಅಧ್ಯಯನ, ತಪಸ್ಸು ಮತ್ತು ವೈದಿಕ ಜೀವನ ವಿಧಾನದ ಅನುಸರಣೆಯಿಂದ ಬಂದಿದೆ.
ಅವರು ಸಂಸ್ಕೃತ, ವೇದಗಳು, ಉಪನಿಷತ್ತುಗಳು, ಭಗವದ್ಗೀತೆ ಮತ್ತು ವಿವಿಧ ಶಾಸ್ತ್ರೀಯ ಗ್ರಂಥಗಳ ಬಗ್ಗೆ ಆಳವಾದ, ಸೂಕ್ಷ್ಮವಾದ ಮತ್ತು ಸಂಕೀರ್ಣವಾದ ಜ್ಞಾನವನ್ನು ಹೊಂದಿದ್ದು, ಪಾರಂಪರಿಕ ಪರಿಕಲ್ಪನೆಗಳ ಒಳನೋಟವನ್ನು ಬಿಚ್ಚಿಡಲು ಸಮರ್ಥರಾಗಿದ್ದಾರೆ.
ಇಬ್ಬರು ಪಂಡಿತರಿಂದ ಪ್ರಾರಂಭವಾಗಿರುವ ವಾಙ್ಮನ ಪ್ರತಿಷ್ಠಾನದ ಧ್ಯೇಯ ಇನ್ನಷ್ಟು ಪಂಡಿತರ ಸಹಯೋಗದಿಂದ ಬೃಹತ್ತಾಗಿ ಬೆಳೆಯಲಿದೆ.

ಮದ್ವೇಶ್

ಮಂಜುನಾಥ್
